Usire Usire| Huchcha| Sudeep| Rajesh Krishnan

ಚಿತ್ರ : ಹುಚ್ಚ (೨೦೦೧)
ಸಂಗೀತ : ರಾಜೇಶ್ ರಮಾನಾಥ್
ಗಾಯಕ : ರಾಜೇಶ್ ಕೃಷ್ಣನ್
ನಟನೆ: ಕಿಚ್ಚ ಸುದೀಪ, ರೇಖಾ ವೇದವ್ಯಾಸ್

ಉಸಿರೇ ಉಸಿರೇ ಈ ಉಸಿರ ಕೊಲ್ಲಬೇಡ
ಪ್ರೀತಿ ಹೆಸರಲಿ ಈ ಹೃದಯ ಗಿಲ್ಲಬೇಡ
ಕಣ್ಣೆರಲೆ ಬೇಯುತಿದೆ ಮನಸು
ನೋವಲ್ಲಿಯೇ ಕಾಯುತಿದೆ ಕನಸು
ಉಸಿರಲೇ ಪ್ರೀತಿಸು ಈ ಉಸಿರನೇ ಪ್ರೀತಿಸು
ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು । ಉಸಿರೇ ।

ಬಾನಿಗೆ ಬಣ್ಣ ಹಚ್ಚೊ ಕಣ್ಣಿನವಳು
ಕಣ್ಣಿಗೆ ಬಟ್ಟೆ ಕಟ್ಟಿ ಪ್ರೀತಿಸಿದಳು
ನಿನ್ ಪ್ರೀತಿಗಿಲ್ಲಿ ಯಾವ ಬಣ್ಣ ಹೇಳು
ನೀ ಬಣ್ಣ ಹಚ್ಚೊ ಮುಂಚೆ ಸ್ವಲ್ಪ ಹೇಳು
ಏ ಭೂಮಿಗೆ ಬೇಲಿ ಕಟ್ಟೋ ನಗೆಯವಳು
ಬಾಯಿಗೆ ಬೀಗ ಹಾಕಿ ಪ್ರೀತಿಸಿದಳು
ಪ್ರೀತಿಸಿದ ಮರುಕ್ಷಣವೇ ಅವಳೇ ನನ್ನುಸಿರು
ಉಸಿರಲೇ ಜೀವಿಸು ಈ ಉಸಿರನೇ ಸೇವಿಸು 
ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು  । ಉಸಿರೇ ।

ಹಾರುವ ಹಕ್ಕಿಗಳ ಜೊತೆ ಅವಳು ರೆಕ್ಕೆಯ ಮೇಲೆ ತಂದು ಕೂರಿಸಿದಳು
ನಿನ್ ಪ್ರೀತಿ ಹಾರೋ ದೂರ ಎಷ್ಟು ಹೇಳು
ನೀ ಹಾರೋವಾಗ ಕಾಣಿಸ್ತಿವ ಹೇಳು
ಮೀನಿನ ಹೆಜ್ಜೆ ಮೇಲೆ ನಡೆವವಳು
ಬಂದರು ಬಾರದಿದ್ರೂ ಹೇಳದವಳು
ಪ್ರೀತಿಸುವ ಕ್ಷಣ ಮಾತ್ರ ಪ್ರೀತಿ ಬಲು ಸುಲಭ
ಉಸಿರಲೇ ಅರಳಿಸು ನಂ ಉಸಿರಾಣೆ ಮರಳಿಸು
ಬಾ ಒಂದೇ ಒಂದು ಸಾರಿ ನನ್ನ ಪ್ರೀತಿಸು  । ಉಸಿರೇ ।

Video song : https://www.youtube.com/watch?v=3kyWhpoHEHY

Comments