Endendu Ninnanu Maretu Song Lyrics | Dr. RajKumar, Kalpana | Eredu Kanasu
ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದೂ ನಿನ್ನನು ಅಗಲೀ ನಾನಿರಲಾರೆ
ಒಂದು ಕ್ಷಣ ನೊಂದರು ನೀ ನಾ ತಾಳಲಾರೆ
ಒಂದು ಕ್ಷಣ ವಿರಹವನು ನಾ ಸಹಿಸಲಾರೆ
ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದೂ ನಿನ್ನನು ಅಗಲೀ ನಾನಿರಲಾರೆ
ಸಾಗರ ಹುಣ್ಣಿಮೆ ಕಂಡು ಉಕ್ಕುವ ರೀತಿ
ನಿನ್ನನು ಕಂಡ ದಿನವೇ ಹೊಮ್ಮಿತು ಪ್ರೀತಿ
ಆಹಹಾ ನೀ ಕಡಲಾದರೆ ನಾ ನದಿಯಾಗುವೆ
ನಿಲ್ಲದೆ ಓಡಿ ಓಡಿ ನಿನ್ನ ಸೇರುವೆ ಸೇರುವೆ ಸೇರುವೆ
ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದೂ ನಿನ್ನನು ಅಗಲೀ ನಾನಿರಲಾರೆ
ನೀ ಹೂವಾದರೆ ನಾನು ಪರಿಮಳವಾಗಿ
ಸೇರುವೆ ನಿನ್ನೊಡಲನ್ನು ಬಲುಚಿತವಾಗಿ
ಓಹೋಹೋ ನೀ ಮುಗಿಲಾದರೆ ನಾ ನಾವಿಲಾಗುವೆ
ಕೇವಲ ನಿನ್ನ ನೋಡಿ ನೋಡಿ ಹಾಡುವೆ ಕುಣಿಯುವೆ ನಲಿಯುವೆ
ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದೂ ನಿನ್ನನು ಅಗಲೀ ನಾನಿರಲಾರೆ
ಆ ಆ ಓ ಹೊ ಆ ಆ
ಸಾವಿರ ಜನುಮವೇ ಬರಲಿ ಬೇಡುವುದೊಂದೇ
ನನ್ನವಳಾಗಿರು ನೀನು ಎನ್ನುವುದೊಂದೇ
ಓಹೋಹೋಹೋ ನೀನಿರುವುದಾದರೆ ಸ್ವರ್ಗವೇ ಈ ಧರೆ
ನಾ ನಿನ್ನ ಜೋಡಿಯಾಗಿ ಇಂದು ಬಾಳುವೆ ಬಾಳುವೆ ಬಾಳುವೆ
ಎಂದೆಂದೂ ನಿನ್ನನು ಮರೆತು ಬದುಕಿರಲಾರೆ
ಇನ್ನೆಂದೂ ಇನ್ನೆಂದೂ ನಿನ್ನನು ಅಗಲೀ ನಾನಿರಲಾರೆ
ಒಂದು ಕ್ಷಣ ನೊಂದರು ನೀ ನಾ ತಾಳಲಾರೆ
ಆಹಹಾಹಾಹ ಓಹೋಹೋಹೋಹೋ
ಚಿತ್ರ : ಎರೆಡು ಕನಸು (1974)
ನಟರು : ಡಾ. ರಾಜಕುಮಾರ್ , ಕಲ್ಪನಾ, ಮಂಜುಳಾ
ಸಂಗೀತ : ರಾಜನ್ ನಾಗೇಂದ್ರ
ಗಾಯನ: ಪಿ ಬಿ ಶ್ರೀನಿವಾಸ್ , ವಾಣಿ ಜಯರಾಮ್
ರಚನೆ : ಚಿ ಉದಯಶಂಕರ್
Watch/Listen to this song here.
Comments
Post a Comment