Ille Ille Ello | Chiru | Chiranjeevi Sarja, Kriti Karabandha | Sonu Nigam, Shreya Ghoshal

ಲ ಲ .....
ಇಲ್ಲೇ ಇಲ್ಲೇ ಎಲ್ಲೋ ನನ್ನ ಮನಸು ಕಾಣೆಯಾಗಿದೆ
ನೆನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ
ಹೇಳದೇನೆ ಕೇಳದೇನೆ ನನಗೆ ಏನೋ ಆಗಿದೆ
ನಿಲ್ಲೆ ನಿಲ್ಲೆ ನಿಲ್ಲೆ ನಿನ್ನ ಪಯಣ ಎಲ್ಲಿ ಸಾಗಿದೆ
ಮೆಲ್ಲ ಮೆಲ್ಲ ಮೆಲ್ಲ ನಿನ್ನ ಗಮನ ಯಾರ ಮೇಲಿದೆ
ಹೇಳದೇನೆ ಕೇಳದೇನೆ ನಿನಗೆ ಏನೋ ಆಗಿದೆ
ಇಲ್ಲೇ ಇಲ್ಲೇ ಎಲ್ಲೋ ನನ್ನ ಮನಸು ಕಾಣೆಯಾಗಿದೆ

ಮುಚ್ಚು ಮರೆಯ ಮಾಡದೆ ಹುಚ್ಚು ಮರೆವು ಕಾದಿದೆ
ಏನು ಸ್ಪಷ್ಠವಾಗದಂಥ ಭಾವ ಇಷ್ಟವಾಗಿದೆ
ಇಂಥ ಆಸೆ ಏಕಿದೆ ನನಗೆ ಅರ್ಥವಾಗದೇ
ಸಾಕು ಮಾಡು ನಿನ್ನ ಕನಸು ತುಂಬಾ ದೂರ ಹೋಗದೆ
ನಾನು ನೋಡೋ ಲೋಕವೆಲ್ಲ ಪ್ರೇಮ ಲೋಕದಂತಿದೆ
ಹೇಳದೇನೆ ಕೇಳದೇನೆ ನಿನಗೆ ಏನೋ ಆಗಿದೆ
ಇಲ್ಲೇ ಇಲ್ಲೇ ಎಲ್ಲೋ ನನ್ನ ಮನಸು ಕಾಣೆಯಾಗಿದೆ
ನೆನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ

ಉಸಿರು ಉಸಿರಿನಲ್ಲಿಯೂ ಯಾರೋ ಬೆರೆತ ಸೂಚನೆ
ಎಂದು ಹೀಗೆ ಇರಲಿ ಇಂಥ ಮಧುರವಾದ ಯಾತನೆ
ಏಕೆ ಇಂಥ ಭಾವನೆ ಏನು ಇದರ ಯೋಜನೆ
ಏನು ಹೇಳಬೇಕೋ ನಿನಗೆ ಈಗ ನಾನು ಕಾಣೆ
ಸವಿಯೋ ಸವಿಯೋ ನನ್ನ ಒಳಗೆ ಖುಷಿಯ ಸ್ಪರ್ಶವಾಗಿದೆ
ಹೇಳದೇನೆ ಕೇಳದೇನೆ ನನಗೆ ಏನೋ ಆಗಿದೆ  । ಇಲ್ಲೇ ।

Comments

Popular posts from this blog

Jotheyali | Geetha | Shankar Nag| SPB, S Janaki

Yaru Kannalli Kannanittu | Orata I Love You | Rajesh Krishnan

Endendu Ninnanu Maretu Song Lyrics | Dr. RajKumar, Kalpana | Eredu Kanasu