Banda Banda Megharaja | Sipayi| Ravichandran, Soundarya

ಓ ಮೇಘರಾಜನೇ ನುಡಿ ನುಡಿ
ಓ ಮೇಘರಾಜನೇ ನುಡಿ ನುಡಿ

ಬಂದ ಬಂದ ಮೇಘರಾಜ ನಮ್ಮ ಊರ ಕೆರೆಗೆ
ತಂದ ತಂದ  ಜೀವದೆಳೆಯ ನಮ್ಮ ಊರ ಬೆಳೆಗೆ
ಓ ಜೀವ ಗಂಗೆಯೇ ಮಿಂದೆ ಮಿಂದೆ ನಾ
ಸ ಮ ಗ ಸ ನೀ ದ ಮ ಗ
ಬಂದ ಬಂದ ಮೇಘರಾಜ ನಮ್ಮ ಊರ ಕೆರೆಗೆ

ಮಳೆರಾಯ ನೀನು ಪನ್ನೀರ ಚೆಲ್ಲಿ ಕೆರೆದೇ ಧರೆಯ
ಸಂತೋಷದಿಂದ ಧರಣಿ ನೀ ತೆರೆದೇ ನಿನ್ನ ಹೃದಯ
ಮೈಯೆಲ್ಲಾ ರೋಮಾಂಚನ ಜಲದ ನೆಲದ ಲಿಂಕನ
ಬಿಡಿಸದ ಬಂಧವೇ ನಿಮ್ಮದು ಬೆರೆಯುವ ಪಂದ್ಯವೇ
ನೀವಿಬ್ಬರು ಬೆರೆತರೆ ಸುತ್ತಲೂ ಭಾಗ್ಯದ ಮಣ್ಣಿನ ಗಂಧವೇ । ಬಂದ ।

ಯಾರ್ಯಾರ ಊರ ಮೋಡ ಅದು ಅಲ್ಲೋ ಎಲ್ಲೋ
ಮಳೆ ಹಚ್ಚೊ ಮುಗಿಲ ಎದೆಗೆ ತವಕ ಕಾಮನಬಿಲ್ಲೊ
ಏನೇನೋ ಆಶ್ಚರ್ಯವೋ ಏನೆಲ್ಲಾ ಆನಂದವೋ
ಬಿಂದುವೇ ಸಿಂಧುವೋ ಇಲ್ಲವೇ ಸಿಂಧುವೇ ಬಿಂದುವೋ
ಈ ಮಾಯದ ಮಳೆಯಲಿ ಎಲ್ಲವೂ ಮಿಂದವೋ  ದೇವರೇ ಎಂದವೋ । ಬಂದ ।

Comments

Popular posts from this blog

Yaru Kannalli Kannanittu | Orata I Love You | Rajesh Krishnan

Jotheyali | Geetha | Shankar Nag| SPB, S Janaki

Endendu Ninnanu Maretu Song Lyrics | Dr. RajKumar, Kalpana | Eredu Kanasu