Posts

Cheluve ondu keltini | Hamsalekha| Premaloka | Ravichandran, Juhi Chawla| SPB, S Janaki

ಚೆಲುವೆ ಒಂದು ಕೇಳ್ತೀನಿ ಇಲ್ಲ ಅಂದೇ ಕೊಡ್ತೀಯಾ ನಿನ್ನ ಪ್ರೀತಿ ಮಾಡ್ತೀನಿ ಮನಸು ಹೃದಯ ಕೊಡ್ತೀಯಾ ಮನಸಿನ ಆಸೆ ಹೇಳಲೇನು ಮುದ್ದಾದ ಗೊಂಬೆ ನೀನು ಮುತ್ತಂತ ಹೆಣ್ಣು ನೀನು ನಾ ನಿನಗೆ ಜೋಡಿ ಅಲ್ಲವೇನು .. ಹಾ ಚೆಲುವ ಒಂದು ಹೇಳ್ತಿನಿ ಇಲ್ಲ ಅಂದೇ ಕೇಳ್ತಿಯಾ ನಿನ್ನ ಪ್ರೀತಿ ಮಾಡ್ತೀನಿ ಹೇಳೋ ಕೆಲಸ ಮಾಡ್ತೀಯಾ ನಿಜವಾದ ಗಂಡೇ ಆದ್ರೆ ನೀನು ಹೆಣ್ಣನ್ನ ಗೆಲ್ಲೋ ನೀನು ಮನಸನ್ನ ಕದಿಯೋ ನೀನು ಆಮೇಲೆ ಪ್ರೀತಿ ಅಲ್ಲವೇನು ನಿನ್ನ ಪ್ರೀತಿ ಗೆಲ್ಲೋಕೆ ಪ್ರಾಣವನ್ನೇ ಕೊಡ್ತೀನಿ ಹೌದ ..ಹಾ..ಹೈದ ..ಹಾ ...ಪರವಾಗಿಲ್ವೇ ನಿನ್ನ ಮನಸು ಕದಿಯೋಕೆ ಏಳು ಜನ್ಮ ಕಾಯ್ತೀನಿ ಹೌದ ..ಹಾ..ಅರೆರೆ  ..ಹಾ ...ಪರವಾಗಿಲ್ವೇ ಪ್ರೀತಿಗಾಗಿ ಲೋಕವನ್ನೇ ಜಯಿಸಬಲ್ಲೆ ನಾ ಹೌದ ವೀರ ಜೋಕುಮಾರ ಮಾತು ನಿಜವೇನಾ..ಆ .. ಚೆಲುವೆ ಒಂದು ಕೇಳ್ತೀನಿ ಇಲ್ಲ ಅಂದೇ ಕೊಡ್ತೀಯಾ ನಿನ್ನ ಪ್ರೀತಿ ಮಾಡ್ತೀನಿ ಹೇಳೋ ಕೆಲಸ ಮಾಡ್ತಿಯಾ ಧೈರ್ಯ ಇಲ್ಲದವರಲ್ಲಿ ಹೇಗೆ ಮನಸು ನೀಡಲೋ ಹೌದ.. ಅಯ್ಯೋ .... ಮುಂದೇನ್ ಗತೀ ಶೌರ್ಯ ಇಲ್ಲದವರನ್ನು ಹೇಗೆ ಪ್ರೀತಿ ಮಾಡಲೋ ಅಯ್ಯಯೋ .. ಹೌದ ... ಇನ್ನೇನ್ ಗತಿ ವೀರನಂಥ ಶೂರನಂಥ ಪ್ರೇಮಿ ನನ್ನವನು ನಿನ್ನ ಹಾಗೆ ಹೇಡಿಯಲ್ಲ ನನ್ನ ಮನ್ಮಥನು.. ಓ .. ಚೆಲುವೆ ಒಂದು ಕೇಳ್ತೀನಿ ಇಲ್ಲ ಅಂದೇ ಕೊಡ್ತೀಯಾ ನಿನ್ನ ಪ್ರೀತಿ ಮಾಡ್ತೀನಿ ಮನಸು ಹೃದಯ ಕೊಡ್ತೀಯಾ ನಿಜವಾದ ಗಂಡೇ ಆದ್ರೆ ನೀನು ಹೆಣ್ಣನ್ನ ಗೆಲ್ಲೊ ನೀ...

Jotheyali | Geetha | Shankar Nag| SPB, S Janaki

ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದೂ ಹೊಸ ಹರುಷವ ತರುವೆನು ಇನ್ನು ಎಂದೂ ಹೋ ಎಂತ ಮಾತಾಡಿದೆ ಇಂದು ನೀ ಎಂಥ ಮಾತಾಡಿದೆ ನನ್ನ ಮನಸಿನ ಭಾವನೆ ನೀನೆ ಹೇಳಿದೆ । ಜೊತೆಯಲಿ । ಆ (ಆಲಾಪ ) ಪ್ರೀತಿ ಎಂದರೇನು ಎಂದು ಈಗ ಅರಿತೆನು (2) ಸವಿ ನುಡಿಯಲಿ ತನು ಅರಳಿತು ಸವಿಗನಸಲಿ ಮನ ಕುಣಿಯಿತು ಒಲವಿನಾ ಈ ಮಾತಿಗೆ ಕರಗಿ ಹೋದೆ ನೋಟಕೆ ಕೊಡುವೆ ನಿನಗೆ ಬಾ ಪ್ರೀತಿ ಕಾಣಿಕೆ । ಜೊತೆಯಲಿ । ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ (2) ಹಾರಾಡುವ ಅರಗಿಣಿಗಳ ಮಾತಾಡಿಸಿ ಮುದ್ದಾಡುವ ಕಾಮನ ಬಿಲ್ಲೇರುವ ಜಾರುತ ನಾವಾಡುವ ಹಗಲು ಇರುಳು ಒಂದಾಗಿ ಹಾಡುವ । ಜೊತೆಯಲಿ । ಚಿತ್ರ: ಗೀತಾ (1981) ನಟನೆ: ಶಂಕರ್ ನಾಗ್ , ಪದ್ಮಾವತಿ ರಾವ್ ಗಾಯನ: S P ಬಾಲಸುಬ್ರಮಣ್ಯಂ , S ಜಾನಕೀ ಸಂಯೋಜನೆ : ಇಳಯರಾಜ 

Danger 15 to 20 Danger | Rakta Kanneru | Upendra, Ramya Krishna| Sadhu Kokila

ಡೇಂಜರ್ 15 ಟು 20 ಡೇಂಜರ್  ಡೇಂಜರ್ 15 ಟು 20 ಡೇಂಜರ್ 20 ಟು 30 ಸೋಲ್ಜೆರ್ 30 ಟು 40 ಹಂಟರ್  40 ಗೆ ನೀ ಬೆಗ್ಗರ್  50 ಗೆ ಟೈರ್ ಪಂಚರ್  16 ವರುಷ ಕಳೆದೋಗುವುದು ಎಜುಕೇಶನ್ ಅನ್ನೋ ಜೈಲಲಿ  ಇನ್ನೈದು ವರುಷ ಓಡೋಗುವುದು ಪ್ರೀತಿ ಪ್ರೇಮದ ಗುಂಗಿನಲಿ  ಮತ್ತೈದು ವರುಷ ಕೈ ಜಾರುವುದು ಕೆಲಸ ಹುಡುಕೋ ಗೋಳಿನಲಿ  ಇನ್ನುಳಿದೊರುಷ ಸವೆದೋಗುವುದು ಫ್ಯಾಮಿಲಿಯ ಜಂಜಾಟದಲಿ  ತಿರುಗಿ ನೋಡು ಹೋಗೋ ದಿನ  ನಿನಗೆ ಉಳಿಯೋದ್ ಮೂರೆ ದಿನ  ಈ ಸತ್ಯ ನಿನಗೆ ತಿಳಿಯೋ ದಿನ  ನೀ ಕಟ್ಟುವೆ ಗಂಟು ಮೂಟೆನಾ ಹ ಹಾ ಐ ಡೋಂಟ್ ಸೇ ನಾನ್ಸೆನ್ಸ್  ।ಡೇಂಜರ್ । ವೇದಾಂತಗಳು ಸಿದ್ಧಾಂತಗಳು ಯಾರೋ ಬರೆದಿಟ್ಟ ಕಟ್ಟು ಕಥೆ  ಜೀವನದ ರಸ ಸವಿಯೋಕೆ ನಿಮಗೆ ನಾನೇ ದಂತ ಕಥೆ  ಭೂಮಿಯಲಿ ನಾ ಹುಟ್ಟಿದ್ದೇ ಬೇಕು ಅನ್ನೋದು ಪಡೆಯೋಕೆ  ಮಧುಮಂಚದಲಿ ಸಿಹಿ ಜೊತೆಗೂಡಿ ಕಹಿಯ ಸತ್ಯಾನ ಹಡೆಯೋಕೆ  ನನ್ನ ಹುಟ್ಟು ಗುಣ ಅದೇ ಅಹಂಕಾರ ಈ ಭೂಪನಿಗೆ ಅದೇ ಅಲಂಕಾರ  ಇದ ಹೇಳುವುದು ನನ್ನ ಅಧಿಕಾರ ಅದ ಕೇಳುವುದು ನಿಮ್ಮ ಗ್ರಹಚಾರ  ಹ ಹಾ ಐ ಡೋಂಟ್ ಕೇರ್  ।ಡೇಂಜರ್ । ಚಿತ್ರ : ರಕ್ತ ಕಣ್ಣೀರು (2003) ನಿರ್ದೇಶನ : ಸಾಧು ಕೋಕಿಲ  ನಟನೆ: ಉಪೇಂದ್ರ , ರಮ್ಯಾ ಕೃಷ್ಣನ್ , ಸಾಧು ಕೋಕಿಲ...

Ille Ille Ello | Chiru | Chiranjeevi Sarja, Kriti Karabandha | Sonu Nigam, Shreya Ghoshal

ಲ ಲ ..... ಇಲ್ಲೇ ಇಲ್ಲೇ ಎಲ್ಲೋ ನನ್ನ ಮನಸು ಕಾಣೆಯಾಗಿದೆ ನೆನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ ಹೇಳದೇನೆ ಕೇಳದೇನೆ ನನಗೆ ಏನೋ ಆಗಿದೆ ನಿಲ್ಲೆ ನಿಲ್ಲೆ ನಿಲ್ಲೆ ನಿನ್ನ ಪಯಣ ಎಲ್ಲಿ ಸಾಗಿದೆ ಮೆಲ್ಲ ಮೆಲ್ಲ ಮೆಲ್ಲ ನಿನ್ನ ಗಮನ ಯಾರ ಮೇಲಿದೆ ಹೇಳದೇನೆ ಕೇಳದೇನೆ ನಿನಗೆ ಏನೋ ಆಗಿದೆ ಇಲ್ಲೇ ಇಲ್ಲೇ ಎಲ್ಲೋ ನನ್ನ ಮನಸು ಕಾಣೆಯಾಗಿದೆ ಮುಚ್ಚು ಮರೆಯ ಮಾಡದೆ ಹುಚ್ಚು ಮರೆವು ಕಾದಿದೆ ಏನು ಸ್ಪಷ್ಠವಾಗದಂಥ ಭಾವ ಇಷ್ಟವಾಗಿದೆ ಇಂಥ ಆಸೆ ಏಕಿದೆ ನನಗೆ ಅರ್ಥವಾಗದೇ ಸಾಕು ಮಾಡು ನಿನ್ನ ಕನಸು ತುಂಬಾ ದೂರ ಹೋಗದೆ ನಾನು ನೋಡೋ ಲೋಕವೆಲ್ಲ ಪ್ರೇಮ ಲೋಕದಂತಿದೆ ಹೇಳದೇನೆ ಕೇಳದೇನೆ ನಿನಗೆ ಏನೋ ಆಗಿದೆ ಇಲ್ಲೇ ಇಲ್ಲೇ ಎಲ್ಲೋ ನನ್ನ ಮನಸು ಕಾಣೆಯಾಗಿದೆ ನೆನ್ನೆ ಮೊನ್ನೆವರೆಗೂ ಇರದ ಕನಸು ಈಗ ಮೂಡಿದೆ ಉಸಿರು ಉಸಿರಿನಲ್ಲಿಯೂ ಯಾರೋ ಬೆರೆತ ಸೂಚನೆ ಎಂದು ಹೀಗೆ ಇರಲಿ ಇಂಥ ಮಧುರವಾದ ಯಾತನೆ ಏಕೆ ಇಂಥ ಭಾವನೆ ಏನು ಇದರ ಯೋಜನೆ ಏನು ಹೇಳಬೇಕೋ ನಿನಗೆ ಈಗ ನಾನು ಕಾಣೆ ಸವಿಯೋ ಸವಿಯೋ ನನ್ನ ಒಳಗೆ ಖುಷಿಯ ಸ್ಪರ್ಶವಾಗಿದೆ ಹೇಳದೇನೆ ಕೇಳದೇನೆ ನನಗೆ ಏನೋ ಆಗಿದೆ  । ಇಲ್ಲೇ ।

Nee Sanihake Bandare| Maleyali Jotheyali | Ganesh | Sonu Nigam | Harikrishna

ನೀ ಸನಿಹಕೆ ಬಂದರೆ ಹೃದಯದ ಗತಿಯೇನು ಹೇಳು ನೀನು ನೀನೇ ಹೇಳು ಇನ್ನು ನಿನ್ನ ಕನಸಿನಲ್ಲಿ ಕರಿ ನೀನು ಶುರು ನಾನು ನಿನ್ನೊಲವಿಗೆ ಮೀಡಿಯಾದ ಹೃದಯದ ಉಪಯೋಗ ಏನು ಹೇಳು..  ಹೇಳು ನೀನು ಸಮೀಪ ಬಂದು ಬಯಕೆಗಳ ವಿಶೇಷವಾದ ಮೆರೆವಣಿಗೆ ಇದೀಗ ನೋಡು ಬೆರೆಳುಗಳ ಸರಾಗವಾದ ಬರವಣಿಗೆ ನಿನ್ನ ಬಿಟ್ಟು ಇಲ್ಲ ಜೀವ ಎಂದು ಕೂಡ ಒಂದೂ ಘಳಿಗೆ ನಿನ್ನ ಮಾತು ಏನೇ ಇರಲಿ ನಿನ್ನ ಮೌನ ನಂದೇ ಏನು ನೀ ಸನಿಹಕೆ ಬಂದರೆ ಹೃದಯದ ಗತಿಯೇನು ಹೇಳು ನೀನು ನೀನೇ ಹೇಳು ನನ್ನ ಎದೆಯ ಸಣ್ಣ ತೆರೆಯ ಧಾರಾವಾಹಿ ನಿನ್ನ ನೆನಪು ನಿನ್ನೆ ತನಕ ಎಲ್ಲಿ ಅಡಗಿ ಇತ್ತು ನಿನ್ನ ಕಣ್ಣ ಹೊಳಪು ಉಸಿರು ಹಾರಿ ಹೋಗುವ ಹಾಗೆ ಬಿಗಿದು ತಪ್ಪಿ ಕೊಳ್ಳು ನೀನು ಮತ್ತೆ ಮತ್ತೆ ನಿನ್ನುಸಿರು ನೀಡುತ ಉಳಿಸು ನನ್ನನು  ದಾರಿಯಲ್ಲಿ ಒತ್ತಿ ಹಿಡಿದು ನಿಂತ ಸಾಥಿ ನೀನೆ ಏನು  ನೀ ಸನಿಹಕೆ ಬಂದರೆ ಹೃದಯದ ಗತಿಯೇನು ಹೇಳು ನೀನು ನೀನೇ ಹೇಳು ನಿನ್ನೊಲವಿಗೆ ಮೀಡಿಯಾದ ಹೃದಯದ ಉಪಯೋಗ ಏನು ಹೇಳು..  ಹೇಳು ನೀನು

Yaru Kannalli Kannanittu | Orata I Love You | Rajesh Krishnan

ಯಾರು ಕಣ್ಣಲ್ಲಿ ಕಣ್ಣನಿಟ್ಟು ಮನಸಿನಲ್ಲಿ ಮನಸನಿಟ್ಟು ನನ್ನ ಒಳಗಿನಂದಾನೆ ನನ್ನ ಕದ್ದೋರ್ ಯಾರು ಯಾರು ಗಾಳಿಲಿ ಮುತ್ತನಿಟ್ಟು ನೀರಿನಲ್ಲಿ ಹೆಜ್ಜೆಯಿಟ್ಟು ನನ್ನ ಒಳಗಿಂದಾನೇ ನನ್ನ ಕದ್ದೋರ್ ಯಾರು ಅವಳ್ ಯಾರೋ ಹುಡುಗಿ ನನ್ನನ್ನೇ ಹುಡುಕಿ ಪ್ರೀತಿಸುತ್ತೀನಿ ಅಂತ ಹಾಡುತ್ತಾಳೆ ಹತ್ತಿರ ಬರದೇ ದೂರನೂ ಇರದೇ ಗುಂಡಿಗೆ ಚುಚ್ಚಿ ನನ್ನ ಕಾಡುತ್ತಳೆ  । ಯಾರು । ಒಂದೊಂದು ಹುಡುಗೀರಲ್ಲು ನೂರು ನೂರು ಕನಸು ಉಂಟು ಯಾರೂ ಎಲ್ಲೂ ಹೇಳೋದಿಲ್ಲ ಹಾಗಂತ ಯಾರು ಕೂಡ ಪ್ರೀತಿ ಮಾಡೋದಿಲ್ಲ ಅಂತ ಎಂದೂ ಬಾಯಿ ಬಿಡೋದಿಲ್ಲ ಆ ನನ್ನಂಥ ಹುಡುಗರಿಗೆ ಪ್ರೇಮ ಗಿಮಾ ಅನ್ನೋದೆಲ್ಲ ಇಲ್ಲಿವರೆಗೂ ತಿಳಿದೇಯಿಲ್ಲ ಎಲ್ಲಿಂದ ಬಂದಳೋ ಇವಳು ತಿಳಿದು ತಿಳಿದು ತಿಳಿಯದಂಗೆ ಜೀವ ಹಿಂಡಿ ಕೊಳ್ತಾಳಲ್ಲ ಇದು ಪ್ರೀತಿ ಅಲ್ಲ ಪ್ರೇಮಾನು ಅಲ್ಲ ಬರಿ ಸ್ನೇಹ ಅಲ್ಲ ಅಂತ ಹೇಳುತ್ತಿಲ್ಲ ಅದೇನೋ ಒಳಗೆ ನನ್ನೊಳಗೊಳಗೆ ಅವಳಿಟ್ಟ ಹೆಜ್ಜೆ ನಾ ಮರೆಯೋದಿಲ್ಲ । ಯಾರು | ಪ್ರೀತಿಲಿ ಸೋಲೇ ಇಲ್ಲ ಸೋತ ಮೇಲೆ ಬದುಕೇ ಇಲ್ಲ ಬದುಕು ಒಂದು ಒಗಟಿನಂತೆ ಈ ನನ್ನ ಬದುಕಿನಲ್ಲಿ ನನ್ನವರು ಯಾರು ಇಲ್ಲ ನಾನು ಒಬ್ಬ ಒರಟನಂತೆ ಈಗಷ್ಟೇ ಈಗ ಅಷ್ಟೇ ಯಾರೋ ನನ್ನ ಎದೆಗೆ ಕನ್ನ ಹೊಡೆದು ಹೊಡೆದು ಹೋದಂತೆ  ನನ್ನಲಿ ಏನೋ ಒಂದು ಕಳೆದುಕೊಂಡ ಹಾಗೆ ಇಂದು ಹಾಗೆ ಹೋಯ್ತು ಮಿಂಚಿನಂತೆ ಅರೆ ತಾಳಲಾರೆ ಮಾತಾಡಲಾರೆ ಅದೇಕೆ ಅಂತ ನಾ ಹೇಳಲಾರೆ ನೀ ಯಾರೇ ಆಗಿರು ನೀ ಎಲ್ಲೇ ಅವಿತಿರ...

Banda Banda Megharaja | Sipayi| Ravichandran, Soundarya

ಓ ಮೇಘರಾಜನೇ ನುಡಿ ನುಡಿ ಓ ಮೇಘರಾಜನೇ ನುಡಿ ನುಡಿ ಬಂದ ಬಂದ ಮೇಘರಾಜ ನಮ್ಮ ಊರ ಕೆರೆಗೆ ತಂದ ತಂದ  ಜೀವದೆಳೆಯ ನಮ್ಮ ಊರ ಬೆಳೆಗೆ ಓ ಜೀವ ಗಂಗೆಯೇ ಮಿಂದೆ ಮಿಂದೆ ನಾ ಸ ಮ ಗ ಸ ನೀ ದ ಮ ಗ ಬಂದ ಬಂದ ಮೇಘರಾಜ ನಮ್ಮ ಊರ ಕೆರೆಗೆ ಮಳೆರಾಯ ನೀನು ಪನ್ನೀರ ಚೆಲ್ಲಿ ಕೆರೆದೇ ಧರೆಯ ಸಂತೋಷದಿಂದ ಧರಣಿ ನೀ ತೆರೆದೇ ನಿನ್ನ ಹೃದಯ ಮೈಯೆಲ್ಲಾ ರೋಮಾಂಚನ ಜಲದ ನೆಲದ ಲಿಂಕನ ಬಿಡಿಸದ ಬಂಧವೇ ನಿಮ್ಮದು ಬೆರೆಯುವ ಪಂದ್ಯವೇ ನೀವಿಬ್ಬರು ಬೆರೆತರೆ ಸುತ್ತಲೂ ಭಾಗ್ಯದ ಮಣ್ಣಿನ ಗಂಧವೇ । ಬಂದ । ಯಾರ್ಯಾರ ಊರ ಮೋಡ ಅದು ಅಲ್ಲೋ ಎಲ್ಲೋ ಮಳೆ ಹಚ್ಚೊ ಮುಗಿಲ ಎದೆಗೆ ತವಕ ಕಾಮನಬಿಲ್ಲೊ ಏನೇನೋ ಆಶ್ಚರ್ಯವೋ ಏನೆಲ್ಲಾ ಆನಂದವೋ ಬಿಂದುವೇ ಸಿಂಧುವೋ ಇಲ್ಲವೇ ಸಿಂಧುವೇ ಬಿಂದುವೋ ಈ ಮಾಯದ ಮಳೆಯಲಿ ಎಲ್ಲವೂ ಮಿಂದವೋ  ದೇವರೇ ಎಂದವೋ । ಬಂದ ।