Jotheyali | Geetha | Shankar Nag| SPB, S Janaki
ಜೊತೆಯಲಿ ಜೊತೆ ಜೊತೆಯಲಿ ಇರುವೆನು ಹೀಗೆ ಎಂದೂ ಹೊಸ ಹರುಷವ ತರುವೆನು ಇನ್ನು ಎಂದೂ ಹೋ ಎಂತ ಮಾತಾಡಿದೆ ಇಂದು ನೀ ಎಂಥ ಮಾತಾಡಿದೆ ನನ್ನ ಮನಸಿನ ಭಾವನೆ ನೀನೆ ಹೇಳಿದೆ । ಜೊತೆಯಲಿ । ಆ (ಆಲಾಪ ) ಪ್ರೀತಿ ಎಂದರೇನು ಎಂದು ಈಗ ಅರಿತೆನು (2) ಸವಿ ನುಡಿಯಲಿ ತನು ಅರಳಿತು ಸವಿಗನಸಲಿ ಮನ ಕುಣಿಯಿತು ಒಲವಿನಾ ಈ ಮಾತಿಗೆ ಕರಗಿ ಹೋದೆ ನೋಟಕೆ ಕೊಡುವೆ ನಿನಗೆ ಬಾ ಪ್ರೀತಿ ಕಾಣಿಕೆ । ಜೊತೆಯಲಿ । ಮೋಡದಲ್ಲಿ ಜೋಡಿಯಾಗಿ ತೇಲಿ ನಲಿಯುವ (2) ಹಾರಾಡುವ ಅರಗಿಣಿಗಳ ಮಾತಾಡಿಸಿ ಮುದ್ದಾಡುವ ಕಾಮನ ಬಿಲ್ಲೇರುವ ಜಾರುತ ನಾವಾಡುವ ಹಗಲು ಇರುಳು ಒಂದಾಗಿ ಹಾಡುವ । ಜೊತೆಯಲಿ । ಚಿತ್ರ: ಗೀತಾ (1981) ನಟನೆ: ಶಂಕರ್ ನಾಗ್ , ಪದ್ಮಾವತಿ ರಾವ್ ಗಾಯನ: S P ಬಾಲಸುಬ್ರಮಣ್ಯಂ , S ಜಾನಕೀ ಸಂಯೋಜನೆ : ಇಳಯರಾಜ