Posts

Showing posts from December, 2022

Ellilli Nodali Ninnane Kanuve Song Lyrics | Dr. Rajkumar, Lakshmi | Naa Ninna Mareyalare

 ಚಿತ್ರ : ನಾ ನಿನ್ನಾ ಮರೆಯಲಾರೆ (1976) ನಟರು : ಡಾ. ರಾಜಕುಮಾರ್ , ಲಕ್ಷ್ಮೀ  ಸಂಗೀತ : ರಾಜನ್ ನಾಗೇಂದ್ರ  ನಿರ್ದೇಶನ : ದೊರೈ ಭಗವಾನ್  ಗಾಯನ: ಡಾ. ರಾಜಕುಮಾರ್ , ಎಸ್ ಜಾನಕಿ  ರಚನೆ : ಚಿ ಉದಯಶಂಕರ್  ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಾಣುವೆ ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಾಣುವೆ ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಾಣುವೆ ಆ ಕೆಂಪು ತಾವರೆ ಆ ನೀರಿಗಾದರೆ   ಈ ಹೊನ್ನ ತಾವರೆ ನನ್ನಾಸೆಯ ಸೆರೆ  (ಆಲಾಪ ) ಮಿಂಚೆಂಬ ಬಳ್ಳಿಗೆ ಮೇಘದ ಆಸರೆ  ಈ ಹೆಣ್ಣ ಬಾಳಿಗೆ ನಿನ್ನ ತೋಳಿನಾಸರೆ ಓ ಯುಗಗಳು ಜಾರಿ ಉರುಳಿದರೆನು ನಾನೆ ನೀನು ನೀನೆ ನಾನು ಆದಮೆಲೆ ಬೇರೆ ಏನಿದೆ ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಾಣುವೆ   ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಾಣುವೆ   ರವಿಯನ್ನು ಕಾಣದೆ ಹಗಲೆಂದು ಆಗದು ನಿನ್ನನ್ನು ನೋಡದೆ ಈ ಪ್ರಾಣ ನಿಲ್ಲದು ಕಡಲನ್ನು ಸೇರದ ನದಿಯೆಲ್ಲಿ ಕಾಣುವೆ   ನಿನ್ನನ್ನು ಸೇರದೆ ನಾ ಹೇಗೆ ಬಾಳುವೆ ವಿರಹದ ನೋವ ಮರೆಯಲಿ ಜೀವ ಹೂವು ಗಂಧ ಸೇರಿದಂತೆ ಪ್ರೆಮದಿಂದ ನಿನ್ನ ಸೇರುವೆ ಎಲ್ಲೆಲ್ಲಿ ನೋಡಲಿ ನಿನ್ನನ್ನೆ ಕಾಣುವೆ   ಕಣ್ಣಲ್ಲಿ ತುಂಬಿರುವೆ ಮನದಲಿ ಮನೆ ಮಾಡಿ ಆಡುವೆ ಎಲ್ಲೆಲ್ಲ...

Endendu Ninnanu Maretu Song Lyrics | Dr. RajKumar, Kalpana | Eredu Kanasu

ಎಂದೆಂದೂ ನಿನ್ನನು ಮರೆತು ಬದುಕಿರಲಾರೆ  ಇನ್ನೆಂದೂ ನಿನ್ನನು ಅಗಲೀ ನಾನಿರಲಾರೆ  ಒಂದು ಕ್ಷಣ ನೊಂದರು ನೀ ನಾ ತಾಳಲಾರೆ  ಒಂದು ಕ್ಷಣ ವಿರಹವನು ನಾ ಸಹಿಸಲಾರೆ  ಎಂದೆಂದೂ ನಿನ್ನನು ಮರೆತು ಬದುಕಿರಲಾರೆ  ಇನ್ನೆಂದೂ ನಿನ್ನನು ಅಗಲೀ ನಾನಿರಲಾರೆ  ಸಾಗರ  ಹುಣ್ಣಿಮೆ ಕಂಡು ಉಕ್ಕುವ ರೀತಿ  ನಿನ್ನನು ಕಂಡ ದಿನವೇ ಹೊಮ್ಮಿತು ಪ್ರೀತಿ  ಆಹಹಾ ನೀ ಕಡಲಾದರೆ ನಾ ನದಿಯಾಗುವೆ  ನಿಲ್ಲದೆ ಓಡಿ ಓಡಿ ನಿನ್ನ ಸೇರುವೆ ಸೇರುವೆ ಸೇರುವೆ  ಎಂದೆಂದೂ ನಿನ್ನನು ಮರೆತು ಬದುಕಿರಲಾರೆ  ಇನ್ನೆಂದೂ ನಿನ್ನನು ಅಗಲೀ ನಾನಿರಲಾರೆ  ನೀ ಹೂವಾದರೆ ನಾನು ಪರಿಮಳವಾಗಿ  ಸೇರುವೆ ನಿನ್ನೊಡಲನ್ನು ಬಲುಚಿತವಾಗಿ  ಓಹೋಹೋ ನೀ ಮುಗಿಲಾದರೆ ನಾ ನಾವಿಲಾಗುವೆ  ಕೇವಲ ನಿನ್ನ ನೋಡಿ ನೋಡಿ ಹಾಡುವೆ ಕುಣಿಯುವೆ ನಲಿಯುವೆ  ಎಂದೆಂದೂ ನಿನ್ನನು ಮರೆತು ಬದುಕಿರಲಾರೆ  ಇನ್ನೆಂದೂ ನಿನ್ನನು ಅಗಲೀ ನಾನಿರಲಾರೆ  ಆ ಆ ಓ ಹೊ ಆ ಆ  ಸಾವಿರ ಜನುಮವೇ ಬರಲಿ ಬೇಡುವುದೊಂದೇ  ನನ್ನವಳಾಗಿರು ನೀನು ಎನ್ನುವುದೊಂದೇ  ಓಹೋಹೋಹೋ ನೀನಿರುವುದಾದರೆ ಸ್ವರ್ಗವೇ ಈ ಧರೆ  ನಾ ನಿನ್ನ ಜೋಡಿಯಾಗಿ ಇಂದು ಬಾಳುವೆ ಬಾಳುವೆ ಬಾಳುವೆ  ಎಂದೆಂದೂ ನಿನ್ನನು ಮರೆತು ಬದುಕಿರಲಾರೆ  ಇನ್ನೆಂದೂ ಇನ್ನೆಂದೂ ನಿನ್ನನು ಅಗಲೀ ನಾನಿರಲಾರೆ ಒಂದು ಕ್ಷಣ ನೊಂದರು ನೀ ನಾ ತಾ...