Posts

Showing posts from February, 2022

Naavaaduva Nudiye Kannada Nudi | Gandhada Gudi (1973) | Dr RajKumar|

 ನಾವಾಡುವ ನುಡಿಯೇ ಕನ್ನಡ ನುಡಿ, ಚಿನ್ನದ ನುಡಿ, ಸಿರಿಗನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ, ಅಂದದ ಗುಡಿ, ಚೆಂದದ ಗುಡಿ ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ ಅಹಹಾ ಅಹಹಾ ಅಹಹಾ (2) ಹಸುರಿನ ಬನಸಿರಿಗೇ ಒಲಿದು ಸೌಂದರ್ಯ ಸರಸ್ವತಿ ಧರೆಗಿಳಿದು ಅಹಹಾ ಒಹೋಹೋ ಆಆ ಓಓ  ಹರಿಯುವ ನದಿಯಲಿ ಈಜಾಡಿ ಹೂಬನದಲಿ ನಲಿಯುತ ಓಲಾಡಿ ಚೆಲುವಿನ ಬಲೆಯ ಬೀಸಿದಳು ಈ ಗಂಧದ ಗುಡಿಯಲಿ ನೆಲೆಸಿದಳು ಇದು ಯಾರ ತಪಸಿನ ಫಲವೋ ಈ ಕಂಗಳು ಮಾಡಿದ ಪುಣ್ಯವೋ ಓ ಹೊ ಹೋ..ಹಾ.. ನಾವಿರುವ ತಾಣವೆ ಗಂಧದ ಗುಡಿ  ಚಿಮ್ಮುತ ಓಡಿವೆ ಜಿಂಕೆಗಳು ಕುಣಿದಾಡುತ ನಲಿದಿವೆ ನವಿಲುಗಳು ಅಹಹಾ ಒಹೋಹೋ ಆಆ ಓ ಹೋ ಮುಗಿಲನು ಚುಂಬಿಸುವಾಸೆಯಲಿ ತೂಗಾಡುತ ನಿಂತ ಮರಗಳಲಿ ಹಾಡುತಿರೆ ಬಾನಾಡಿಗಳು ಎದೆಯಲ್ಲಿ ಸಂತಸದಾ ಹೊನಲು ಇದು ವನ್ಯ ಮೃಗಗಳ ಲೋಕವೋ ಈ ಭೂಮಿಗೆ ಇಳಿದ ನಾಕವೋ ಆಹಹಾ… ಹೋ… ನಾವಾಡುವ ನುಡಿಯೇ ಕನ್ನಡ ನುಡಿ ನಾವಿರುವ ತಾಣವೆ ಗಂಧದ ಗುಡಿ ಅಂದದ ಗುಡಿ ಗಂಧದ ಗುಡಿ ಚೆಂದದ ಗುಡಿ ಶ್ರೀಗಂಧದ ಗುಡಿ ಅಹಹಾ ಅಹಹಾ ಓಹೊಹೋ ಓಹೊಹೋ  ಓ ಹೋ ಹೊ